ಮೊದಲ ಡೇಟ್‌ನಲ್ಲಿ ಮಾಡಲೇಬಾರದ ತಪ್ಪು
ಮೊದಲ ಭೇಟಿ ಅನ್ನುವುದೇ ಕುತೂಹಲಭರಿತವಾದದ್ದು.
ಅಷ್ಟೆ ಅಳುಕು, ಹಿಂಜರಿಕೆಯನ್ನು ಕುಡ ಇದೇ ಭೇಟಿ ಹುಟ್ಟಿಸುತ್ತದೆ. ಏಕೆಂದರೆ ಅಲ್ಲಿ ಎಲ್ಲವೂ ಹೊಸತು.
ಹಿಂದೆಂದೂ ನೋಡರಿಯದ ವ್ಯಕ್ತಿಯ ಎದುರು ನಿಲ್ಲಬೇಕು, ಮಾತನಾಡಬೇಕು,
ಅಭಿಪ್ರಾಯ ಹಂಚಿಕೊಳ್ಳಬೇಕು ಎಂಬುದೇ ಹಲವರಿಗೆ ಗೊಂದಲ ಸೃಷ್ಟಿಸುತ್ತದೆ.
ಜೀವನಸಂಗಾತಿಯ ಆಯ್ಕೆ ಅಥವಾ ಇನ್ಯಾವುದೇ ಉದ್ದೇಶ ಇರಬಹುದು.
ಒಟ್ಟಾರೆ ನೀವಿಬ್ಬರೂ ರೊಮ್ಯಂಟಿಕ್ ಡೇಟ್‌ಗೆ ಸಿದ್ಧವಾಗಿದ್ದೀರ ಅಂದರೆ ಒಂದಿಷ್ಟು ಅಂಶಗಳನ್ನು
ಗಮನದಲ್ಲಿಟ್ಟುಕೊಳ್ಳಿ. ಅದೇ ರೀತಿ ಕೆಲವು ತಪ್ಪುಗಳನ್ನು ಮಾಡಲೇಬೇಡಿ. ಏಕೆಂದರೆ ಆ ಸಂದರ್ಭದಲ್ಲಿ
ನೀವು ಮಾಡುವ ತಪ್ಪು ನಿಮ್ಮ ವ್ಯಕ್ತಿತ್ವದ ಮೇಲಿನ ಭಾವನೆ ಆಗಿರಬಹುದು. ಮೊದಲ ಭೇಟಿ ಇನ್ನೊಂದು
ಭೇಟಿಗೆ ಪ್ರೇರಣೆ ನೀಡುವಂತಿರಬೇಕು. ಅಂತಹ ಸುಂದರ ಡೇಟ್ ನಿಮ್ಮದಾಗಬೇಕು ಅಂದರೆ ಎಚ್ಚರಿಕೆಯಿಂದ
ನಿರ್ವಹಿಸಬೇಕು. ಹಾಗಂತ ಮುಖವಾಡ ಹಾಕಿಕೊಂಡು ಹೋಗಬೇಡಿ. ಸಹಜವಾಗಿರಿ. ಧರಿಸುವ ದಿರಿಸು ಅತಿಯಾಗಿ ಪ್ರಚೋದನೆ ನೀಡುವಂತಿರಬಾರದು. ಆದರೆ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗಲಿ. ಮೇಕಪ್ ಮೇಲೆ ಹಿಡಿತವಿರಲಿ. ನೀವು ಹಾಕಿರುವ ಸುಗಂರ್ಧ ದ್ರವ್ಯ ಎದುರುಗಡೆ ಇರುವವರಿಗೆ ಕಿರಿಕಿರಿ ಭಾವ ಮೂಡಿಸದಂತಿರಲಿ. ಮೊದಲ ಭೇಟಿಯಲ್ಲೇ ನಿಮ್ಮ ಬದುಕಿನ ಎಲ್ಲಾ ಸಂಗತಿಗಳನ್ನು ಹೇಳುವ ಅಗತ್ಯವಿಲ್ಲ. ಅತಿಯಾದ ಸಲುಗೆ ಬೇಡ. ಅಪರಿಚಿತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ.
ಅತಿಯಾದ ಆಹಾರವನ್ನು ಆರ್ಡರ್ ಮಾಡಬೇಡಿ. ಅದೇ ರೀತಿ ತಟ್ಟೆಯಲ್ಲಿ ಬಿಡುವ ಅಭ್ಯಾಸ ಬೇಡ.
ನಿಮ್ಮ ವ್ಯಕ್ತಿತ್ವದ ಬಗ್ಗೆ ಅತಿಯಾದ ಹೊಗಳಿಕೆ ಬೇಡ. ಅನಗತ್ಯ ಸುಳ್ಳು ನಿಮ್ಮ ಮಾತಿನಲ್ಲಿ
ನುಸುಳದಿರಲಿ. ತಡರಾತ್ರಿಯ ಡೇಟ್ ಬೇಡ.
Comments